ಯಶ್‍ ಮತ್ತು ಶ್ವೇತಾ ಶ್ರೀವಾಸ್ತವ್ 
ಸಿನಿಮಾ ಸುದ್ದಿ

ಯಶ್ ಉತ್ತಮ ನಟ, ಶ್ವೇತಾ ಶ್ರೀವಾಸ್ತವ್‍ಗೆ ಶ್ರೇಷ್ಠ ನಟಿ ಪ್ರಶಸ್ತಿ

2014ನೇ ಸಾಲಿನ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನವಾಗಿದ್ದು, ಮಿಸ್ಟರ್ ಆ್ಯಂಡ್ ಮಿಸ್ಸೆಸ್ ರಾಮಾಚಾರಿ ಚಿತ್ರದ ಅಭಿನಯಕ್ಕಾಗಿ ಯಶ್‍ಗೆ ಶ್ರೇಷ್ಠ ನಟ ಹಾಗೂ ಫೇರ್ ಆ್ಯಂಡ್ ಲವ್ಲಿ ಸಿನಿಮಾಕ್ಕಾಗಿ ಶ್ವೇತಾ ಶ್ರೀವಾಸ್ತವ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ದೊರೆತಿದೆ...

ಚೆನ್ನೈ: 2014ನೇ ಸಾಲಿನ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನವಾಗಿದ್ದು, ಮಿಸ್ಟರ್ ಆ್ಯಂಡ್ ಮಿಸ್ಸೆಸ್ ರಾಮಾಚಾರಿ ಚಿತ್ರದ ಅಭಿನಯಕ್ಕಾಗಿ ಯಶ್‍ಗೆ ಶ್ರೇಷ್ಠ ನಟ ಹಾಗೂ ಫೇರ್ ಆ್ಯಂಡ್ ಲವ್ಲಿ ಸಿನಿಮಾಕ್ಕಾಗಿ ಶ್ವೇತಾ ಶ್ರೀವಾಸ್ತವ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ದೊರೆತಿದೆ.

ಮಿಸ್ಟರ್ ಆ್ಯಂಡ್ ಮಿಸ್ಸೆಸ್ ರಾಮಾಚಾರಿಗೆ ಉತ್ತಮ ಚಿತ್ರ ಪ್ರಶಸ್ತಿ ಲಭ್ಯವಾಗಿದೆ. ಹಾಗೆಯೇ ಉಳಿದವರು ಕಂಡಂತೆ ಸಿನಿಮಾದ ನಿರ್ದೇಶನಕ್ಕಾಗಿ ರಕ್ಷಿತ್ ಶೆಟ್ಟಿಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಲಭ್ಯವಾಗಿದೆ. ದೃಶ್ಯ ಚಿತ್ರದ ಅಭಿನಯಕ್ಕಾಗಿ ಅಚ್ಯುತ್ ಕುಮಾರ್ ಗೆ ಶ್ರೇಷ್ಠ ಪೋಷಕ ನಟ ಮತ್ತು ಒಗ್ಗರಣೆ ಚಿತ್ರದ ನಟನೆಗಾಗಿ ಸಂಯುಕ್ತ ಹೊರನಾಡು ಅವರಿಗೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿದಕ್ಕಿದೆ.

ಉತ್ತಮ ಗಾಯಕ ಪ್ರಶಸ್ತಿ ವಿಜಯಪ್ರಕಾಶ್ (ಉಳಿದವರು ಕಂಡಂತೆ), ಉತ್ತಮ ಗಾಯಕಿ ಪ್ರಶಸ್ತಿ ಅನುರಾಧ ಭಟ್ (ಉಗ್ರಂ)ಗೆ ಸಿಕ್ಕಿದೆ. ಹಾಗೆಯೇ ಉಳಿದವರು ಕಂಡಂತೆ ಸಿನಿಮಾದ ಸಂಗೀತಕ್ಕಾಗಿ ಬಿ.ಅಜನೀಶ್ ಅವರಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಉತ್ತಮ ಗೀತರಚನೆ ಪ್ರಶಸ್ತಿ ನಾಗೇಂದ್ರ ಪ್ರಸಾದ್ (ಅಂಬರೀಷ್)ಗೆ ಸಿಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ ಇಲ್ನೋಡಿ, ಪುಡಿ ರೌಡಿಗಳ ಹಾವಳಿ : Parameshwar ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT